ಶನಿವಾರ ೨೦ ಜೂನ್ ೨೦೦೯
ಬ್ಲಾಗ್ ಬಗ್ಗೆ
http://makrumanju.blogspot.com
ನಲ್ಲಿ ನೋಡಬಹುದು.
ಧನ್ಯವಾದಗಳು.
ಮಂಜು.ಎಂ.ಕೆ
ಶನಿವಾರ ೨೪ ಜನವರೀ ೨೦೦೯
ಗುರುವಾರ ೧೩ ನವೆಂಬರ್ ೨೦೦೮
ನಿನ್ನಯ ಗುರುತು - ನನ್ನ ಕವನ
ನಿನ್ನ ಒಲವಿನ ಗುರುತು ಕಣೇ
ಗಗನದಿ ಮಿನುಗುವ ಚುಕ್ಕಿಯು ಕೂಡ
ನಿನ್ನ ಕಂಗಳ ಪ್ರತಿಬಿಂಬ ಕಣೇ
ಅರಳಿದ ತಾವರೆ ಎಲೆಗಳ ಮೇಲೆ
ನಾಟ್ಯವಾಡುವ ಪುಟ್ಟ ಇಬ್ಬನಿಯೇ
ದುಂಬಿಯ ರಂಜಿಸಿ ಗಮಗಮ ಎನ್ನುವ
ಹೂವಿನ ಪರಿಮಳ ಮಕರಂದವು ನೀ
ನಿನ್ನ ಹೃದಯದಿ ನೆಲೆಸಿರುವ
ನನ್ನ ಮನಸ್ಸನ್ನು ನಾ ಕಂಡೆ ಕಣೇ
-ಮಾ.ಕೃ.ಮಂಜು
ಶನಿವಾರ ೧ ನವೆಂಬರ್ ೨೦೦೮
ಕನಸ್ಸು - ನನ್ನ ಕವನ
ಕನಸ್ಸಲ್ಲಿ ಬರುವವಳು
ಸದಾ ನನ್ನ ಕಾಡುತಿಹಳು
ಪ್ರೀತಿಯ ಕೊಟ್ಟವಳು
ಹೃದಯದಿ ನೆಲೆಸಿಹಳು
*********************
ನನ್ನವಳು ನನಗೆಲ್ಲಾ
ಪ್ರೀತಿಯ ತೊರೆದಿಲ್ಲ
ನೆನಪನ್ನು ಮರೆತಿಲ್ಲ
ಕನಸ್ಸಾಗಿ ಉಳಿದಳಲ್ಲ
**********************
ನನ್ನ ಮೇಲೆ ತೋರದಿರು ಕೋಪ
ಸಹಿಸಲಾರೇ ಅದರ ತಾಪ
ಬಿಟ್ಟುಬಿಡು ಈ ನಿನ್ನ ಮುಂಗೋಪ
ಮಾಡುತ್ತಿರುವೇ ಸದಾ ನಿನ್ನದೇ ಜಪ
**ಮಾ.ಕೃ.ಮಂಜು**
ಹಲ್ಮಿಡಿ ಶಾಸನ

ಶುಕ್ರವಾರ ೩೧ ಅಕ್ಟೋಬರ್ ೨೦೦೮
ಕನ್ನಡ ನಾಡಿನ ಜನ್ಮದಿನದ ಶುಭಾಶಯಗಳು
ಅಳಿಯದ ನೆನಪು - ನನ್ನ ಕವನ
ಹೃದಯದಿ ಮೂಡಿದ ಭಾವನೆಗಳು
ಅವುಗಳೇ ನಿನ್ನಯ ನೆನಪುಗಳು
ನೆನಪಿನ ಪುಟಗಳ ಅಂಚಿನಲಿ
ಮೂಡಿದೆ ಸುಂದರ ಕನಸುಗಳು
ಸಾವಿರ ಕನಸ್ಸಿನ ಹಾಳೆಯಲಿ
ಜಾರಿ ಹೋಗದಿರಲಿ ನಿನ್ನ ಮಾತುಗಳು
ಯಾವ ಮೋಡಿಯಲಿ ನೀ ಸಿಲುಕಿರುವೆಯೋ
ನನ್ನ ಮನಸ್ಸ ನೀ ಮರೆತಿರುವೆ
ಗುಡುಗು ಸಿಡಿಲು ಬಂದರೂ ಸರಿಯೇ
ನಿನ್ನ ನೆನಪು ಅಳಿಯುವುದೇ?
ಲೋಕದ ಸೃಷ್ಟಿಗೆ ದೇವರ ಕೃಪೆಯು
ನನ್ನ ಕವನಕ್ಕೆ ನೀ ಸ್ಪೂರ್ತಿಯು
-ಮಾಕೃಮ
ಮೌಲ್ಯ - ನನ್ನ ಕವನ
ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ,
ನೀ ಇಲ್ಲದ ನನ್ನ ಬಾಳು
ಪಲ್ಲವಿ ಇಲ್ಲದ ಚರಣದಂತೆ
ಚಂದ್ರನಿಲ್ಲದ ಭೂಮಿಯಂತೆ
ಉಸಿರಿಲ್ಲದ ದೇಹದಂತೆ
ಎಂದು ವರ್ಣಿಸಿದರೆ,
ಆ ಪ್ರಿಯತಮೆ ಈತನಿಗೆ,
ನೀ ಇಲ್ಲದ ನನ್ನ ಬಾಳು
ಹಣವಿಲ್ಲದ ಕಿಸೆಯಂತೆ
ಬ್ಯಾಲೆನ್ಸ್ ಇಲ್ಲದ ಎ.ಟಿ.ಎಮ್ ಕಾರ್ಡ್ ನಂತೆ
ಕರೆನ್ಸಿ ಇಲ್ಲದ ಮೊಬೈಲ್ ನಂತೆಎನ್ನುತ್ತಾಳೆ,.
-ಮಾಕೃಮ-
ಭಾವನೆಯ ಹಕ್ಕಿ - ನನ್ನ ಕವನ
ಭಾವನೆಯ ಹಕ್ಕಿ
ಭಾವನೆಯ ಹಕ್ಕಿಯು ಹಾಡುತ್ತಿದೆ
ಮನಸ್ಸಿನ ಮಾತನು ಹೇಳುತ್ತಿದೆ
ಬದುಕಿನ ಸುಂದರ ಪುಟಗಳಲ್ಲಿ
ಕನಸ್ಸಿನ ಸಾವಿರ ಪುಟಗಳನು
ಕಲ್ಲು - ಮುಳ್ಳಿನ ಬಾಳಿಗೆ
ಪ್ರೀತಿ ಮಮತೆಯ ಆಶ್ರಯವು
ನೋವು ನಲಿವುಗಳ ಬಡಿತಕೆ
ತಾಳ್ಮೆ ಬಾಳಿನ ಜೊತೆಗೆರಲಿ
ಮನಸಿನ ದುಃಖವ ನುಂಗಿ
ನಗುವಿನ ದೀಪವ ಹಚ್ಚಿದೆ
ಯಾರು ಕಾಣದ ಅಂತರಂಗದಿ
ಮೌನದ ಮಾತುಗಳು ಹೊರಡುತ್ತಿವೆ
-ಮಾಕೃಮ-ಹೆಣ್ಣು - ನನ್ನ ಕವನ
ಹೆಣ್ಣಿನ ಮಾಯಾ ಮೋಹಕ್ಕೆ
ಸಿಲುಕದವರಿಲ್ಲ ಜಗತ್ತಿನಲ್ಲಿ
ಆದಿಯ ಸೃಷ್ಟಿಕರ್ತಳು ಇವಳು
ಅಂತ್ಯದ ರೂವಾರಿಯು ಆಗಬಲ್ಲಳು
ರಾಜ ಮಹಾರಾಜರು ಇವಳಿಗಾಗಿ
ಹರಿಸಿದರು ರಕ್ತದ ಕೋಡಿ
ಆದರೂ ಯಾರಿಗೂ ತಿಳಿಯುತ್ತಿಲ್ಲ
ಇವಳ ಮನಸ್ಸಿನ ಮರ್ಮದ ಮೋಡಿ
ರಾಜ್ಯ ಕಟ್ಟಲು ಇವಳೇ ಸ್ಪೂರ್ತಿ
ರಾಜ್ಯ ನಿರ್ನಾಮಕ್ಕೂ ಇವಳೇ ಕುತಂತ್ರಿ
ಏನೇ ಇದ್ದರೂ ಬದುಕಿನಲ್ಲಿ
ಇವಳದೇ ಕಾರುಬಾರು.
-ಮಾಕೃಮ-ನಮ್ಮ ಕನ್ನಡ ನಾಡು - ನನ್ನ ಕವನ
ಜೋಗಿನ ಜಲಪಾತದ ಸೊಬಗಿನ ಇಂಪು
ಸುಂದರ ಇತಿಹಾಸ ಸೃಷ್ಟಿಸಿದ ನಾಡು
ನಾಡನ್ನು ಕಟ್ಟಿದ ರಾಜರ ವೈಭವ
ನೀ ಒಮ್ಮೆ ಬಂದು ನೋಡು ಬಾರ
ಅಮೃತ ಮುತ್ತು - ನನ್ನ ಕವನ
ಅನಾಥ ಮಗುವಾದೆ ನಾನು - ಹೊಸ ಜೀವನ
[ಹೆಣ್ಣು]ಉಳ್. ಳ್ ಳ್ ಳ್... ಆಯಿ ಆಯಿ.....
ನನ್ನ ಹಳ್ಳಿ - ನನ್ನ ಕವನ
ನನ್ನ ಹಳ್ಳಿ
ಹಳ್ಳಿಯ ಸೌಂದರ್ಯ ಸೊಬಗು
ಹಚ್ಚ ಹಸಿರಿನ ಕಾಂತಿಯ ಮೆರಗು
ದಟ್ಟವಾದ ಮರಗಳ ಸಾಲು
ಪ್ರಕೃತಿಯ ಉಳಿವಿಗೆ ಇದರ ಸವಾಲು
ತಣ್ಣನೆಯ ಗಾಳಿಯ ತಂಪು
ಸೊಗಸಾದ ಹಕ್ಕಿಯ ಧ್ವನಿಯ ಇಂಪು
ಸತ್ಯ ನಿಷ್ಟತೆಗೆ ಹೆಸರಾದ ಜನ
ಮೋಸವರಿಯದ ಮುಗ್ಧ ಜನ
ಅಜ್ಜಿಯು ಹೇಳುವ ಚೆಂದದ ಕಥೆ
ಮಾಸಿಹೋದ ನೆನಪುಗಳ ವ್ಯಥೆ
ಜನರಾಡುವ ಕಸ್ತೂರಿ ಕನ್ನಡ
ಕೇಳಲು ನಿಂತರೆ ಮಹಾದಾನಂದ
ಉಳಿದಿದೆ ಸಂಸ್ಕೃತಿಯ ಬೇರು
ಸರ್ವರೂ ಒಂದಾಗಿ ಬಾಳುವ ಊರು
ಹುಟ್ಟಿದರೆ ಹುಟ್ಟಬೇಕು ಹಳ್ಳಿಯಲಿ
ಸೌಂದರ್ಯ ಸಾರುವ ಶಾಂತಿಧಾಮದಲಿ
-* ಮಾ.ಕೃ.ಮ*
ರಂಗಿನ ಚಿಟ್ಟೆ - ನನ್ನ ಕವನ
ಇದು ಮನಸ್ಸಿನ ಮಾಯಾಲೋಕ
ಹುಡುಕುತ್ತಿರುವೆ ಈ ಪ್ರೀತಿಯ ಮೂಲವೆಲ್ಲಿ
ಪ್ರೀತಿ-ಪ್ರೇಮವೇ ಲೋಕದ ಸೃಷ್ಟಿಗೆ ಮೂಲ
ಓ ನನ್ನ ಜೀವವೇ -ನನ್ನ ಕವನ
ಓ ನನ್ನ ಜೀವವೇ
ಹೃದಯದ ಪ್ರೀತಿಯ ಕಲರವ
ಎನೋ ಕಳೆದುಹೋದ ಅನುಭವ
ಎದೆಯಲಿ ಪ್ರೀತಿಯ ಕಂಪನ
ಸದಾ ಜಿನುಗುವ ಸಿಂಚನ
ಸದಾ ಕಾಡುತ್ತಿದೆ ನಿನ್ನ ನೆನಪು
ಮಾಸಿಹೋದ ನೆನಪುಗಳ ಇಂಪು
ನಾ ಹುಡುಕುತ್ತಿರುವೆ ಆನಂದ
ದುಃಖವಿರದ ಸುಖದಲ್ಲಿಂದ
ಮನವು ಹಕ್ಕಿಯಂತೆ ಹಾರುತಿರಲಿ
ಅಂತ್ಯವಿರದ ಪ್ರೀತಿಯ ದಿಗಂತದಲಿ
ನವಿಲಿನಂತೆ ನಲಿಯುತ್ತಿದೆ ಮನಸ್ಸು
ನನಸ್ಸಾಗುವುದೇ ನನ್ನ ಕನಸ್ಸು
ಸದಾ ಮಾಡುತ್ತಿರುವೆ ನಿನ್ನ ಮನನ
ನೀ ಕೃಪೆ ತೋರಿದರೆ ನಾ ಪಾವನ
ನಾ ಬೆದರುವೆ ನನ್ನ ಆತ್ಮಕ್ಕೆ
ಧೈರ್ಯ ಕಳೆದುಹೋದ ಈ ಕ್ಷಣಕ್ಕೆ
ಮನದಲ್ಲಿ ಹುಟ್ಟಿತು ಈ ಕವನ
ನಾ ಮಾಡಲೇನು ಇದರ ವಾಚನ
- *ಮಾ.ಕೃ.ಮಂಜು*


